ಪ್ರಾಂಕೌ, ಗಿಲ್‍ಬರ್ಟ್
	1881-1952. ಇಂಗ್ಲಿಷ್ ಕಾದಂಬರಿಕಾರ. ಈಟನ್ನಿನಲ್ಲಿ ವಿದ್ಯಾಭ್ಯಾಸ ಮಾಡಿ ತಂದೆ ನಡೆಸುತ್ತಿದ್ದ ಸಗಟು ಸಿಗಾರ್ ವ್ಯಾಪಾರಕ್ಕೆ ಸೇರಿದ. ಮೊದಲ ಪುಸ್ತಕ ಒನ್ ಆಫ್ ಅಸ್ (1912) ಪ್ರಕಟವಾದ ಮೇಲೆ ವ್ಯಾಪಾರಿ ಕೆಲಸದ ಸಂಬಂಧವಾಗಿ ಪ್ರಪಂಚ ಪ್ರವಾಸ ಕೈಗೊಂಡ. ಎರಡು ಮಹಾಯುದ್ಧಗಳಲ್ಲೂ ಭಾಗವಹಿಸಿದ.

	ಗನ್ಸ್ ಆಫ್ ವಾರ್ (1916) ಎಂಬುದು ಯುದ್ಧ ವಿಷಯಗಳಿಗೆ ಸಂಬಂಧಿಸಿದ ಈತನ ಕವನ ಸಂಕಲನ. 1923ರಲ್ಲಿ ಇವನ ಎಲ್ಲ ಕವನಗಳನ್ನೂ ಸಂಕಲಿಸಿ ಪ್ರಕಟಿಸಲಾಯಿತು. ಇವನಿಗೆ ಕೀರ್ತಿ ತಂದ ಕಾದಂಬರಿ ಪೀಟರ್ ಜ್ಯಾಕ್ಸನ್, ಸಿಗಾರ್ ಮರ್ಚೆಂಟ್ (1919). ಅನಂತರ ಸೀಡ್ಸ್ ಆಫ್ ಎಂಚ್ಯಾಂಟ್‍ಮೆಂಟ್ (1921), ಜಿರಾಲ್ಡ್ ಕ್ರ್ಯಾನ್ಸ್‍ಟನ್ಸ್ ಲೇಡಿ (1924), ಮಾರ್ಟಿನ್ ಮೇಕ್ ಬಿಲೀವ್ (1930), ವೈನ್ ವಿಮೆನ್ ಅಂಡ್ ನೆಯ್ಟರ್ಸ್ (1932), ಎವ್ವೆರಿ ವುಮನ್ (1933), ತ್ರಿ ಇಂಗ್ಲಿಷ್ ಮೆನ್ (1935), ದಿ ಡೇಂಜರಸ್ ಇಯರ್ಸ್ (1937), ವಿಂಟರ್ ಆಫ್ ಡಿಸ್‍ಕಂಟೆಂಟ್ (1941). ಮೈಕೇಲ್ಸ್ ವೈಫ್ (1948), ಆಲಿವರ್ ಟ್ರೆಂಟನ್, ಕೆ.ಸಿ. (1951)- ಈ ಮೊದಲಾದ ಕಾದಂಬರಿಗಳನ್ನು ಬರೆದ.

	ಸೆಲ್ಫ್ ಪೋಟ್ರ್ರೇಟ್ (1951) ಎಂಬುದು ಇವನ ಆತ್ಮಕಥೆ.
(ಎಚ್.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ